ನಮಸ್ಕಾರ
ಆರೋಗ್ಯವೇ ಭಾಗ್ಯ ಅಂತ ಹಿರಿಯರು ಹೇಳಿದ್ದಾರೆ. COVID ಮಹಾಮಾರಿ ಅಪ್ಪಳಿಸಿದ ನಂತರ ಆರೋಗ್ಯದ ಬಗ್ಗೆ ಸಾಮಾನ್ಯ ಜನರಲ್ಲಿ ಕೂಡ ಅರಿವು ಮೂಡಲು ಪ್ರಾರಂಭವಾಗಿದೆ. ಈ ನಿಟ್ಟಿನಲ್ಲಿ ಕೆಲವೊಂದು ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ಅದರ ಚಿಕಿತ್ಸಾ ವಿಧಾನದ ಬಗ್ಗೆ ಎಲ್ಲರಿಗೂ ತಲುಪುವ ರೀತಿಯಲ್ಲಿ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ. ತುರ್ತು ಪರಿಸ್ಥಿತಿಯಲ್ಲಿ ನಿಮಗೆ ತಿಳಿದಿರಬೇಕಾದ ಕೆಲವೊಂದು ಮಾಹಿತಿಯನ್ನು ಇಲ್ಲಿ ಕನ್ನಡದಲ್ಲಿ, ಆದಷ್ಟು ಸರಳವಾಗಿ ನಿಮಗೆ ವಿವರಿಸುವ ಪ್ರಯತ್ನ ಮಾಡಿದ್ದೇನೆ.
ನಾವೆಲ್ಲರೂ ಸೇರಿ ನಮ್ಮ ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ಯಾರಿಗಾದರೂ ಸಹಾಯಕ್ಕೆ ಬಂದರೆ, ಒಂದೇ ಒಂದು ಜೀವವನ್ನು ಉಳಿಸುವಲ್ಲಿ ಯಶಸ್ವಿಯಾದರೆ ಈ ಪ್ರಯತ್ನಕ್ಕೆ ಜಯ ಸಿಕ್ಕ ಹಾಗೆ.
ಹಾಗೆ ದೈನಂದಿನ ನನ್ನ ವೃತ್ತಿ ಜೀವನದಲ್ಲಿ ನಡೆದ ಕೆಲವೊಂದು ಸ್ವಾರಸ್ಯಕರ ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ, ತಿಳಿಯಿರಿ, ತಿಳಿಸಿರಿ.
Disclaimer: ಇಲ್ಲಿ ಪ್ರಸ್ತಾಪಿಸುವ ವಿಷಯಗಳು ಕೇವಲ ಅರಿವು ಮೂಡಿಸುವ ಪ್ರಯತ್ನವಾಗಿದೆ. ಯಾವುದೇ ಚಿಕಿತ್ಸೆಯು ವೈದ್ಯರ ಪರಾಮರ್ಶೆ ನಂತರ ಮಾತ್ರ ತೆಗೆದುಕೊಳ್ಳುವಂತದ್ದು. ಇಲ್ಲಿ ಯಾವುದೇ ಔಷಧಿ ಅಥವಾ ಆಸ್ಪತ್ರೆಯ ಪುಷ್ಟಿಕರಣ (promotion) ಮಾಡಿರುವುದಿಲ್ಲ.
ಡಾ|| ನಿರಂಜನ್ ರಮೇಶ್
MBBS,DA,DNB(Anesthesiology)
DEM,IDCCM,IFCCM