NAGARAJ BHAT

Video: https://youtu.be/UCA4Q4j_tAg
ತುಳುನಾಡಿನ ಐತಿಹಾಸಿಕ‌ ಕ್ಷೇತ್ರದಲ್ಲಿ ಒಂದಾದ ಉಬಾರ್ (ಉಪ್ಪಿನಂಗಡಿ) ಕ್ಷೇತ್ರದ ಉಬಾರ್ ಕಡಪುವಿನಲ್ಲಿ ( ನದಿ ದಂಡೆಯಲ್ಲಿ) ಒಂದು ಕಾಲದಲ್ಲಿ ಹಗಲು ಹೊತ್ತಿನಲ್ಲಿ ಮನುಷ್ಯರು ದೋಣಿ ದಾಟಿಸುವುದಾದರೆ ರಾತ್ರಿ ಹೊತ್ತು ಮನುಷ್ಯ ರೂಪದಲ್ಲಿ ಜಂಬು ಕಲ್ಕುಡನ ಮಗ ಶಂಭು ಕಲ್ಕುಡ ದೋಣಿ ಸಾಗಿಸುವ ಕಾಯಕದಲ್ಲಿರುತ್ತಾನೆ. ಆ ಸಂದರ್ಭದಲ್ಲಿ ಅಳಿಯೂರ ಬಸದಿಯ ಇಂದ್ರರು ಇವನನ್ನು ತನ್ನ ವಶದಲ್ಲಿರಿಸುವ ಉದ್ದೇಶದಿಂದ ಇವನ ದೋಣಿ ಹತ್ತಿ ಮಂತ್ರ ಪ್ರಯೋಗಿಸುವಾಗ, ಎರಡು ಬಾರಿ ನೀರಿನ ಸುಳಿಯಲ್ಲಿ ಅವರನ್ನು ಮುಳುಗಿಸಿ ಮೂರನೇ ಮುಳುಗಡೆಗೆ ಸಿದ್ದವಾದಾಗ ಅವರು ತಮ್ಮ ತಪ್ಪಿನ ಅರಿವಾಗಿ ಶಂಭು ಕಲ್ಕುಡನಲ್ಲಿ ಕ್ಷಮೆಯಾಚಿಸಿದರು. ಪ್ರಸನ್ನನಾದ ಶಂಭು ಕಲ್ಕುಡನು ಅಳಿಯೂರು ಬಸದಿಯಲ್ಲಿ ಒಂದು ಕಂಬದ ಚಪ್ಪರದಲ್ಲಿ ನೇಮ ಪಡೆದು ನೆಲೆಯಾಗುತ್ತೇನೆಂದು ಹೇಳಿ ಅಲ್ಲಿ ಬಂದು ನೆಲೆಯಾಗುತ್ತಾನೆ.
ಬಸದಿಯಿಂದ ಗುತ್ತಿನಲ್ಲಿ ನೆಲೆಯಾಗುವ ಮನಸ್ಸಿನಿಂದ ಮಜಲೊಡಿ ಗುತ್ತಿಗೆ ಕೊರಗರ ವೇಷದಲ್ಲಿ ಭಿಕ್ಷೆ ಬೇಡಲು ಬಂದ ಶಂಭು ಕಲ್ಕುಡನು ಚಾವಡಿಯ ಮಂಚದಲ್ಲಿ ಕುಳಿತದನ್ನು ನೋಡಿದ ಗುತ್ತಿನ ಯಜಮಾನ ಬೆತ್ತದಲ್ಲಿ ಬಾರಿಸುತ್ತಾರೆ. ಅಲ್ಲಿಂದ ಮೇಗಿನ ಕೊಯಕುಡೆ ಬಲ್ಲಾಳರ ಮನೆಗೆ ಬಂದು ಬೆತ್ತದ ಪೆಟ್ಟ್ ಬಲ್ಲಾಳೆ.. ಬೆತ್ತದ ಪೆಟ್ಟ್ (ಬೆತ್ತದ ಪೆಟ್ಟು ಬಲ್ಲಾಳರೇ) ಎಂದು ಹೇಳಿ ನೀರು ಕೇಳಿದಾಗ ಬಲ್ಲಾಳರು ಹಾಲು ನೀಡಿತ್ತಾರೆ. ಇದರಿಂದ ಸಂತೃಪ್ತಗೊಂಡ ಕಲ್ಕುಡ ಅವರ ಮನೆಯ ಮಾಳಿಗೆಯಲ್ಲಿ ಆರಾಧನೆ ಪಡೆದು ಮಾಡ ಸ್ವೀಕರಿಸಿ ಇಂದಿಗೂ ನೇಮ ಪಡೆಯುತ್ತಿದ್ದಾನೆ.

(ಮಾಹಿತಿ: ಶ್ರೀ ಉಮೇಶ್ ಭಟ್, ಅಸ್ರಣ್ಣರು- ವಾಲ್ಪಾಡಿ)
Image Courtesy: Jithesh Pai Mujooru

7 months ago | [YT] | 1,720