Bhoota Kola/ Daivaradhane, Temple festivals, Tiger Dance & other cultural related videos of Coastal Karnataka..



NAGARAJ BHAT

OM SHANTI 🙏
Shree M. Vijayraj Adhikari, Maara Gutthu - Venur
ಮಾರ ಗುತ್ತಿನ ಗಡಿ ಪ್ರಧಾನರಾದ ಶ್ರೀ ವಿಜಯರಾಜ್ ಅಧಿಕಾರಿಯವರು ಬೆಳ್ತಂಗಡಿ ತಾಲೂಕು ವೇಣೂರಿನ ಶ್ರೀಕ್ಷೇತ್ರ ಮುದ್ದಾಡಿ ದೈವಸ್ಥಾನದ ಆಡಳಿತ ಮೊಕ್ತೇಸರರು. ನಿವೃತ್ತ ಉಪನ್ಯಾಸಕರಾದ ಅಧಿಕಾರಿಯವರು ಆಗಸ್ಟ್ 16ರಂದು ಸಂಜೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಸಹಿತ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ವೇಣೂರು ಶ್ರೀ ಜೈನ ದಿಗಂಬರ ತೀರ್ಥಕ್ಷೇತ್ರ ಸಮಿತಿಯ ಮಾಜಿ ಕಾರ್ಯದರ್ಶಿಗಳು, ವಿವೇಕಾನಂದ ಸೇವಾ ಟ್ರಸ್ಟ್ ನ ಸ್ಥಾಪಾಕಾಧ್ಯಕ್ಷರೂ ಆದ ಇವರು ಪ್ರಗತಿಪರ ಕೃಷಿಕರು, ಧಾರ್ಮಿಕ, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.
ಸನಾತನ ಧರ್ಮದ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯ ಅಪ್ಪಟ ಅಭಿಮಾನಿಯಾಗಿದ್ದ ಇವರು, ಪರಮಾತ್ಮ ಶ್ರೀಕೃಷ್ಣನಲ್ಲಿ ಮತ್ತು ತನ್ನ ಗುತ್ತಿನ‌ ಪ್ರಧಾನ ದೈವ ಮಾರವಂಡಿಯಲ್ಲಿ ಯಾವತ್ತೂ ಭೇದವನ್ನು ಕಾಣದೇ ಎರಡೂ ಶಕ್ತಿಗಳು ಒಂದೇ ಎಂದು ದೃಢವಾಗಿ ನಂಬಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಪ್ರಾರ್ಥನೆ.. 🙏
ಅನನ್ಯಶ್ಚಿಂತಯಂತೋ ಮಾಂ ಯೇ ಜನ: ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ || 22||
(ಭಗವದ್ಗೀತೆ: ಅಧ್ಯಾಯ 9, ಶ್ಲೋಕ 22)
ಯಾವಾಗಲೂ ನನ್ನ ಬಗ್ಗೆ ಯೋಚಿಸುವವರು ಮತ್ತು ನನ್ನ ಬಗ್ಗೆ ವಿಶೇಷವಾದ ಭಕ್ತಿಯಲ್ಲಿ ತೊಡಗುವವರು ಇದ್ದಾರೆ. ಅವರ ಮನಸ್ಸು ಯಾವಾಗಲೂ ನನ್ನಲ್ಲಿ ಲೀನವಾಗಿರುವ ಅವರಿಗೆ, ನಾನು ಅವರ ಕೊರತೆಯನ್ನು ಒದಗಿಸುತ್ತೇನೆ ಮತ್ತು ಅವರು ಈಗಾಗಲೇ ಹೊಂದಿರುವುದನ್ನು ಸಂರಕ್ಷಿಸುತ್ತೇನೆ.
ಹರೇ ಕೃಷ್ಣ 🙏

2 months ago (edited) | [YT] | 75

NAGARAJ BHAT

https://youtu.be/jV9Cx-8bMrM
Veera Hanumantha Nema, Kalasa | ವೀರ ಹನುಮಂತ ನೇಮ, ಕಳಸ

4 months ago | [YT] | 180

NAGARAJ BHAT

Video: https://youtu.be/UCA4Q4j_tAg
ತುಳುನಾಡಿನ ಐತಿಹಾಸಿಕ‌ ಕ್ಷೇತ್ರದಲ್ಲಿ ಒಂದಾದ ಉಬಾರ್ (ಉಪ್ಪಿನಂಗಡಿ) ಕ್ಷೇತ್ರದ ಉಬಾರ್ ಕಡಪುವಿನಲ್ಲಿ ( ನದಿ ದಂಡೆಯಲ್ಲಿ) ಒಂದು ಕಾಲದಲ್ಲಿ ಹಗಲು ಹೊತ್ತಿನಲ್ಲಿ ಮನುಷ್ಯರು ದೋಣಿ ದಾಟಿಸುವುದಾದರೆ ರಾತ್ರಿ ಹೊತ್ತು ಮನುಷ್ಯ ರೂಪದಲ್ಲಿ ಜಂಬು ಕಲ್ಕುಡನ ಮಗ ಶಂಭು ಕಲ್ಕುಡ ದೋಣಿ ಸಾಗಿಸುವ ಕಾಯಕದಲ್ಲಿರುತ್ತಾನೆ. ಆ ಸಂದರ್ಭದಲ್ಲಿ ಅಳಿಯೂರ ಬಸದಿಯ ಇಂದ್ರರು ಇವನನ್ನು ತನ್ನ ವಶದಲ್ಲಿರಿಸುವ ಉದ್ದೇಶದಿಂದ ಇವನ ದೋಣಿ ಹತ್ತಿ ಮಂತ್ರ ಪ್ರಯೋಗಿಸುವಾಗ, ಎರಡು ಬಾರಿ ನೀರಿನ ಸುಳಿಯಲ್ಲಿ ಅವರನ್ನು ಮುಳುಗಿಸಿ ಮೂರನೇ ಮುಳುಗಡೆಗೆ ಸಿದ್ದವಾದಾಗ ಅವರು ತಮ್ಮ ತಪ್ಪಿನ ಅರಿವಾಗಿ ಶಂಭು ಕಲ್ಕುಡನಲ್ಲಿ ಕ್ಷಮೆಯಾಚಿಸಿದರು. ಪ್ರಸನ್ನನಾದ ಶಂಭು ಕಲ್ಕುಡನು ಅಳಿಯೂರು ಬಸದಿಯಲ್ಲಿ ಒಂದು ಕಂಬದ ಚಪ್ಪರದಲ್ಲಿ ನೇಮ ಪಡೆದು ನೆಲೆಯಾಗುತ್ತೇನೆಂದು ಹೇಳಿ ಅಲ್ಲಿ ಬಂದು ನೆಲೆಯಾಗುತ್ತಾನೆ.
ಬಸದಿಯಿಂದ ಗುತ್ತಿನಲ್ಲಿ ನೆಲೆಯಾಗುವ ಮನಸ್ಸಿನಿಂದ ಮಜಲೊಡಿ ಗುತ್ತಿಗೆ ಕೊರಗರ ವೇಷದಲ್ಲಿ ಭಿಕ್ಷೆ ಬೇಡಲು ಬಂದ ಶಂಭು ಕಲ್ಕುಡನು ಚಾವಡಿಯ ಮಂಚದಲ್ಲಿ ಕುಳಿತದನ್ನು ನೋಡಿದ ಗುತ್ತಿನ ಯಜಮಾನ ಬೆತ್ತದಲ್ಲಿ ಬಾರಿಸುತ್ತಾರೆ. ಅಲ್ಲಿಂದ ಮೇಗಿನ ಕೊಯಕುಡೆ ಬಲ್ಲಾಳರ ಮನೆಗೆ ಬಂದು ಬೆತ್ತದ ಪೆಟ್ಟ್ ಬಲ್ಲಾಳೆ.. ಬೆತ್ತದ ಪೆಟ್ಟ್ (ಬೆತ್ತದ ಪೆಟ್ಟು ಬಲ್ಲಾಳರೇ) ಎಂದು ಹೇಳಿ ನೀರು ಕೇಳಿದಾಗ ಬಲ್ಲಾಳರು ಹಾಲು ನೀಡಿತ್ತಾರೆ. ಇದರಿಂದ ಸಂತೃಪ್ತಗೊಂಡ ಕಲ್ಕುಡ ಅವರ ಮನೆಯ ಮಾಳಿಗೆಯಲ್ಲಿ ಆರಾಧನೆ ಪಡೆದು ಮಾಡ ಸ್ವೀಕರಿಸಿ ಇಂದಿಗೂ ನೇಮ ಪಡೆಯುತ್ತಿದ್ದಾನೆ.

(ಮಾಹಿತಿ: ಶ್ರೀ ಉಮೇಶ್ ಭಟ್, ಅಸ್ರಣ್ಣರು- ವಾಲ್ಪಾಡಿ)
Image Courtesy: Jithesh Pai Mujooru

7 months ago | [YT] | 1,720

NAGARAJ BHAT

Netther Muguli Yenne Boolya - Part- 1
https://youtu.be/ObtfZYIGzDw
History of Netther Muguli Daiva

9 months ago (edited) | [YT] | 92

NAGARAJ BHAT

watch: https://youtu.be/kyTSNVDZLMs
Green Park Friends, Kudroli 20th year Celebration at Uday Nivas
#pilinalike #tigerdance #dasara ‪@mangalorerhythms‬

11 months ago | [YT] | 40

NAGARAJ BHAT

Click- https://youtu.be/oXkNDy0701g
Pili Parba 2023 Winners Jagadamba Huli- MFC
‪@mangalorerhythms‬

1 year ago (edited) | [YT] | 91

NAGARAJ BHAT

Mantradevate, Panjurli-Kallurti Kola
https://youtu.be/EQcQ6fTeDfc

1 year ago (edited) | [YT] | 1,844

NAGARAJ BHAT

Kuppettu Panjurli https://youtu.be/eC5fG6Hk468

1 year ago (edited) | [YT] | 2,347